Big Dawgs by Hanumankind ಮೂಲಕ ಜಾಗತಿಕ ಮಟ್ಟದಲ್ಲಿ ಗಮನಸೆಳೆದ ಭಾರತೀಯ ಮೂಲದ ದೇಸಿ ರ್ಯಾಪರ್

Hanumankind

Big Dawgs by Hanumankind ಸದ್ಯ ಎಲ್ಲೆಡೆ ಗಮನಸೆಳೆಯುತ್ತಿರುವ ಹಾಗೂ ಯುಟ್ಯೂಬ್ ನಲ್ಲಿ ಹಲವಾರು ಮಿಲಿಯನ್ ಗಟ್ಟಲೆ ವೀಕ್ಷಣೆಗಳಿಸುತ್ತಿರುವ ಅಂತಾರಾಷ್ಟ್ರೀಯ ಸಂಗೀತವಾಗಿದ್ದು ಇದನ್ನು ಹಾಡಿದ್ದು ಹಾಗೂ ಶೂಟ್ ಮಾಡಿದ್ದು ಒಟ್ಟಾರೆ ಇದರ ನಿರ್ಮಾಣ ಭಾರತದ್ದೆ ಅಂದರೆ ನಮ್ಮಲ್ಲಿರುವ ಸಂಗೀತಾಭಿಮಾನಿಗಳಿಗೆಲ್ಲ ಇದು ಹೆಮ್ಮೆಯ ವಿಷಯ.

Hanumankind

ರ್ಯಾಪರ್ ಅಥವಾ ಹಿಪ್ ಹಾಪ್ ಸಂಗೀತ ಭಾರತದಲ್ಲಿ ಯಾರೂ ಕೇಳಿಲ್ಲ ಅಂತೇನಿಲ್ಲ, ಆದರೆ ಈ ರೀತಿಯ ವಿಭಿನ್ನ ಶೈಲಿಯ ಸಂಗೀತದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದವರೂ ಯಾರೂ ಇಲ್ಲ. ಈ ರೀತಿಯ ಸಂಗೀತ ಸಾಮಾನ್ಯವಾಗಿ ಕ್ರಂತಿಕಾರಿ ಬಗೆಯ ಕಾವ್ಯದ ಸಾಲುಗಳು ಹಾಗೂ ಅದಕ್ಕೆ ಪೂರಕವಾದ ಮೈಜುಮ್ಮೆನಿಸುವಂತಹ ಬೀಟ್ಸ್, ಬಾಸ್ ಎಫೆಕ್ಟ್ ಹೊಂದಿರುವ ಸಂಗೀತ ಹೊಂದಿರುತ್ತದೆ.

ಯುವ ಪೀಳಿಗೆಯಂತೂ ಈ ಬಗೆಯ ಸಂಗೀತವೆಂದರೆ ಹುಚ್ಚೆದ್ದು ಕುಣಿಯುತ್ತಾರೆ. ಆದಾಗ್ಯೂ ಈ ಹಿಪ್ ಹಾಪ್ ಸಂಗೀತವು ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ಜನಪ್ರೀಯವಾಗಿದ್ದು ಪಾಶ್ಚಾತ್ಯ ದೇಶಗಳ ಗಾಯಕರೇ ಈ ವಲಯದಲ್ಲಿ ತಮ್ಮ ಅಧಿಪತ್ಯವನ್ನು ದಶಕಗಳಿಂದ ಮೆರೆಯುತ್ತಿದ್ದಾರೆ.

ಆದರೆ ಕಾಲವೆಂಬುದು ಯಾರ ಸ್ವತ್ತೂ ಅಲ್ಲ ಹಾಗೂ ಪ್ರತಿಭೆ ಎಂಬುದು ಒಂದಿಲ್ಲ ಒಂದು ದಿನ ತಡವಾಗಿಯಾದರೂ ಸರಿ ಮುಖ್ಯ ನೆಲೆಗೆ ಬಂದೇ ಬರುತ್ತದೆ. ಸದ್ಯ ಭಾರತೀಯ ಮೂಲದ ಗಾಯಕ ಹನುಮಾನ್ ಕೈಂಡ್ ಅಕಾ ಸೂರಜ್ ಅವರು ಭಾರತದಲ್ಲೂ ಈ ರೀತಿಯ ಹಿಪ್ ಹಾಪ್ ಗಾಯನ ಪ್ರತಿಭೆಗೆ ಬರವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ಅವರ ನೂತನ ಟ್ರ್ಯಾಕ್ ಬಿಗ್ ಡಾವ್ಗ್ಸ್ ಫೀಚರಿಂಗ್ ಕಲ್ಮಿ ಜಗತ್ತಿನಾದ್ಯಂತ ಹಿಪ್ ಹಾಪ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಅಷ್ಟೇ ಅಲ್ಲ, ಅಮೆರಿಕ ಹಾಗೂ ಜಾಗತಿಕ ಸಂಗೀತ ಬಿಲ್ ಬೋರ್ಡ್ ಚಾರ್ಟ್ ನಲ್ಲಿ ಈ ಸಂಗೀತ ಮೊದಲ ಹತ್ತು ಸ್ಥಾನಗಳಲ್ಲಿ ಬಂದಿರುವುದು ಭಾರತದ ಪಾಲಿಗೆ ಪ್ರಥಮವಾಗಿದೆ ಹಾಗೂ ಇದು ಹೆಮ್ಮೆಯ ವಿಷಯವೂ ಹೌದು.

ಮೂಲತಃ ಭಾರತದ ಕೇರಳ ರಾಜ್ಯದ ಮಲ್ಲಪುರಂನಿಂದ ಬಂದಿರುವ ಸೂರಜ್ ಚೆರುಕಟ್ ೧೯೯೨ ರಲ್ಲಿ ಜನಿಸಿದ್ದು ತಮ್ಮ ಆರಂಭದ ವರ್ಷಗಳನ್ನು ಅಮೆರಿಕದ ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಕಳೆದಿದ್ದಾರೆ. ಅಲ್ಲಿಯೇ ಅವರು ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು ಟೆಕ್ಸಾಸ್ ಶೈಲಿಯ ಅಕ್ಸೆಂಟ್ ಹೊಂದಿರುವ ಇಂಗ್ಲೀಷ್ ಮಾತನಾಡಲು ನಿಪುಣರಾದರು. ಸಂಗೀತದಲ್ಲಿ ಅದರಲ್ಲೂ ವಿಶೇಷವಾಗಿ ಹಿಪ್ ಹಾಪ್ ಅಥವಾ ರ್ಯಾಪ್ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಇವರನ್ನು ಪ್ರೇರೇಪಿಸಿದ ಸಂಗೀತ ಗಾಯಕರೆಂದರೆ Three 6 Mafia, Project Pat, UGK, TidexX ಮುಂತಾದವರು.

ತದನಂತರ ಭಾರತಕ್ಕೆ ಮರಳಿದ ಅವರು ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಅಧ್ಯನವನ್ನು ೨೦೧೨ ರಲ್ಲಿ ಕೋಯಮತ್ತೂರಿನಲ್ಲಿ ಪೂರ್ಣಗೊಳಿಸಿದರು. ಸಂಗೀತ ಅವರ ಆದ್ಯತೆಯ ವಲಯವಾಗಿದ್ದರಿಂದ ಈ ರಂಗದಲ್ಲೇ ತಮ್ಮ ಪಯಣ ಮುಂದುವರೆಸಿದರು.

2019 ಇಪಿ ಕಲಾರಿ ಮೂಲಕ “ಡೈಲಿ ಡೋಸ್” ಮೂಲಕ ಸೂರಜ್ ತಮ್ಮ ಸಂಗೀತ ಕ್ಷೇತ್ರದ ಪ್ರಯಾಣ ಆರಂಭಿಸಿದರು. ಕೇವಲ ಐದು ವರ್ಷಗಳಲ್ಲೇ ಈ ಭಾರತೀಯ ರ್ಯಾಪರ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದರು. ಇದೀಗ ಬಂದಿರುವ ಅವರ ಹೊಸ ಸಂಗೀತ ಬಿಗ್ ಡಾವ್ಗ್ಸ್ ಜಗತ್ತಿನಾದ್ಯಂತ ಅವರ ಹೆಸರನ್ನು ಇನ್ನಷ್ಟು ಜನಪ್ರೀಯಗೊಳಿಸಿದೆ.

ಈ ಹಾಡನ್ನು ಕೇರಳದ ಪೊನ್ನಾನಿ ಜಿಲ್ಲೆಯ ಕರಾವಳಿ ಪ್ರದೇಶವೊಂದರಲ್ಲಿ ಶೂಟ್ ಮಾಡಲಾಗಿದೆ. ಇದರ ಹಿನ್ನೆಲೆಯು ಸರ್ಕಸ್ ನಲ್ಲಿ ಸಾಮಾನ್ಯವಾಗಿ ನಾವೆಲ್ಲ ನೋಡುವಂತೆ “ಸಾವಿನ ಬಾವಿ” ಸುತ್ತ ಸುತ್ತುತ್ತದೆ. ವಾಸ್ತವದಲ್ಲು ಇದು ಗೋಳಾಕಾರದ ಗೋಡೆಯಾಗಿದ್ದು ಅದರಲ್ಲಿ ಸವಾರರು ತಮ್ಮ ಪ್ರಾಣದ ಹಂಗನ್ನು ತೊರೆದು ಗುರುತ್ವಾಕರ್ಷಣ ಶಕ್ತಿಗೆ ಸವಾಲೆಸೆದು ಅಡ್ಡಲಾಗಿ ತಮ್ಮ ವಾಹನ ಸುತ್ತಾಕಾರದಲ್ಲಿ ಓಡಿಸಿ ಜನರನ್ನು ಮನರಂಜಿಸುತ್ತಾರೆ.

ಈ ದೃಶ್ಯವನ್ನು ತಮ್ಮ ಸಂಗೀತದಲ್ಲಿ ಬಳಸಿರುವ ಸೂರಜ್ ಇದರಲ್ಲಿ ಸ್ವಯಂ ಆಗಿಯೂ ಭಯವಿಲ್ಲದೆ ಸ್ಟಂಟ್ ಮಾಡಿದ್ದಾರೆ. ಅಲ್ಲದೆ ಅದ್ಭುತ ಗಾಯನ ಸಾಲುಗಳೊಂದಿಗೆ ರೋಮಂಚನಗೊಳಿಸುವಂತಹ ಹಿನ್ನೆಲೆಯ ಸಂಗೀತ ಸೇರಿಕೊಂಡು ಈ ಹಾಡನ್ನು ಒಂದು ಅದ್ಭುತವನ್ನಾಗಿ ಮಾಡಿದೆ. ಪ್ರಸ್ತುತ ಈ ಹಾಡೇ ಜಗತ್ತಿನಾದ್ಯಂತ ವೃತ್ತಿಪರ ಹಿಪ್ ಹಾಪ್ ಸಂಗೀತಗಾರರ ಗಮನಸೆಳೆದಿದ್ದು ಅಂತಾರಾಷ್ಟ್ರೀಯ್ ಹಿಟ್ ಸಂಗೀತವಾಗಿ ಹೊರಹೊಮ್ಮಿದೆ.

Watch the official video here 

Leave a Reply

Your email address will not be published. Required fields are marked *