ಕೆನಡಾದಲ್ಲಿ ಜಸ್ಟಿನ್ ಟ್ರುಡೊ ಅವರ ಸರ್ಕಾರ ಬೀಳುವ ಸರ್ವ ಸಾಧ್ಯತೆ..!

Justin Trudeau

ಕೆನಡಾದಲ್ಲಿ ಜಸ್ಟಿನ್ ಟ್ರುಡೊ ಅವರ ಸರ್ಕಾರಕ್ಕೆ ನೀಡಿದ್ದ ಬೇಂಬಲವನ್ನು ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ ಹಿಂಪಡೆದಿದ್ದರಿಂದ ಸರ್ಕಾರ ಬೀಳುವ ಸಾಧ್ಯತೆ ಕಂಡುಬರುತ್ತಿರುವುದಾಗಿ ಹಲವು ಮಾಧ್ಯಮ ವರದಿಗಳು ಪ್ರಕಟಿಸಿವೆ.

“ಮಾಡಿದ್ದುಣ್ಣೋ ಮಾರಾಯಾ”, “ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು” ಇತ್ಯಾದಿ ನುಡಿಗಟ್ಟನ್ನು ನಾವು ಕೇಳಿಯೇ ಇರುತ್ತೇವೆ. ಸರಳವಾಗಿ ಹೇಳಬೇಕೆಂದರೆ ಯಾರು ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೋ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ ಅನ್ನುತ್ತದೆ ನಮ್ಮ ನಂಬಿಕೆ ಆಧಾರಿತ ನುಡಿಗಟ್ಟುಗಳು.

Photo ANI

ತಾವು ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಆಸೆಯಿಂದ ಖಾಲಿಸ್ತಾನಿ ಪರ ಇರುವ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿಯ ಜಗಮೀತ್ ಅವರಿಂದ ಬೆಂಬಲ ಪಡೆದು ಕಳೆದ ಕೆಲ ಸಮಯಗಳಿಂದ ಜಗಮೀತ್ ಅವರ ವಿಶ್ವಾಸ ಇರಿಸಿಕೊಳ್ಳುವಂತೆ ಭಾರತದ ಪರ ಇಲ್ಲ ಸಲ್ಲದ ಆರೋಪ ಮಾಡುತ್ತ, ಹಾಗೂ ಕೆನಡಾದಲ್ಲಿ ಖಾಲಿಸ್ತಾನಿಗಳು ಭಾರತದ ವಿರುದ್ಧ ನಡೆಸಿದ ಅಭಿಯಾನಗಳಿಗೆ ಅವರ ಕ್ರಮವೂ ಜರುಗಿಸದೆ ಟ್ರುಡೊ ಎರಡು ದೇಶಗಳ ಮಧ್ಯದ ಸಂಬಂಧಕ್ಕೆ ಗಮನಾರ್ಹವಾಗಿ ಹಾನಿಯಾಗುವಂತೆ ನಡೆದಿದ್ದರು.

ಟ್ರುಡೊ ಯಾರ ಮೇಲೆ ಭರ್ರವಸೆ ಇಟ್ಟು ಇಷ್ಟೊಂದು ವಿರೋಧ ಕಟ್ಟಿಕೊಂಡಿದ್ದರೋ ಕೊನೆಗೆ ಆ ವ್ಯಕ್ತಿಯೇ ಟ್ರುಡೊ ಅವರಿಂದ ಹಿಂದೆ ಸರಿದಿದ್ದು ಮಾತ್ರ ಪ್ರಧಾನಿಗೆ ನುಂಗಲಾರದ ತುತ್ತಾದಂತಾಗಿದೆ.

ಸದ್ಯ, ಕೆನಡಾದ ಪ್ರಧಾನಿಯಾಗಿರುವ ಜಸ್ಟಿನ್ ಟ್ರುಡೊ ತಮ್ಮ ಪ್ರಧಾನಿ ಗದ್ದುಗೆಯಿಂದ ಹಿಂದೆ ಸರಿಯುವ ಎಲ್ಲ ಸಾಧ್ಯತೆ ಇರುವಂತಹ ವಿದ್ಯಮಾನ ನಡೆದಿದ್ದು ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟವಾಗಿ ತಿಳಿಯಲಿದೆ.

ಬುಧವಾರದಂದು ಕೆನಡಾದ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರ ರಚಿಸಲು ಅನುಕೂಲವಾಗುವಂತೆ ಜಗಮೀತ್ ಸಿಂಗ್ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ ನೀಡಿದ್ದ ತನ್ನ ಬೆಂಬಲವನ್ನು ಹಿಂಪಡೆದಿದೆ. ಇದರಿಂದ ಜಸ್ಟಿನ್ ಟ್ರುಡೊ ಸರ್ಕಾರ ರಚನೆಗೆ ಅವಶ್ಯಕವಾಗಿ ಬೇಕಾಗಿದ್ದ ಮ್ಯಾಜಿಕ್ ನಂಬರ್ ಅನ್ನು ಕಳೆದುಕೊಂಡಿದ್ದು ಅದು ಬೀಳುವ ಎಲ್ಲ ಸಾಧ್ಯತೆ ಕಂಡುಬರುತ್ತಿದೆ.

ಈ ಮೂಲಕ ಶೀಘ್ರದಲ್ಲೇ ಮತ್ತೆ ಕೆನಡಾದಲ್ಲಿ ಚುನಾವಣೆ ನಡೆಯುವ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಆದಾಗ್ಯೂ ಟ್ರುಡೊ ದೇಶದಲ್ಲಿ ನಿಗದಿತ ಸಮಯಕ್ಕಿಂತ ಪೂರ್ವದಲ್ಲೆ ಮತ್ತೆ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕೆನಡಾದ ಕಾನೂನು ನಿಯಮನುಸಾರ ೨೦೨೫ರ ಅಕ್ಟೋಬರ್ ನಲ್ಲಿ ಚುನಾವಣೆ ಜರುಗಬೇಕು. ಇನ್ನೊಂದೆಡೆ ಜಗಮೀತ್ ಸಿಂಗ್ ೨೦೨೨ ರಲ್ಲಿ ಟ್ರುಡೊ ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದಿದ್ದು ಚುನಾವಣೆ ನಡೆಯುವ ಒಂದು ವರ್ಷಕ್ಕೂ ಮುಂಚೆಯೇ ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ. ಇದೀಗ ಕೆನಡಿಯನ್ ಸರ್ಕಾರಕ್ಕೆ ಬರೆ ಎಳೆದಂತಾಗಿದೆ.

ಈಗೇನಿದ್ದರೂ, ಜಸ್ಟಿನ್ ಮುಂದುವರೆಯಬೇಕಿದ್ದಲ್ಲಿ ಹೊಸ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮತ್ತೆ ತಮ್ಮ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.

ಜಗಮೀತ್ ಸಿಂಗ್ ಯಾರು?

ಮೊದಲೇ ಕಳೆದಬಾರಿ ಚುನಾವಣೆಯಲ್ಲಿ ಜಸ್ಟಿನ್ ಟ್ರುಡೊ ಅವರ ಪಕ್ಷ ಮೈನಾರಿಟಿ ಪಕ್ಷವಾಗಿತ್ತು. ಆ ಸಂದರ್ಭದಲ್ಲಿ ಕೆನಡಾದಲ್ಲಿ ಸರ್ಕಾರ ರಚನೆಗೆ ಬೇಕಾಗಿದ್ದ ಸಂಖ್ಯೆಯನ್ನು ಪಡೆಯಲು ಅವರಿಗೆ ಬೇರೆ ಪಕ್ಷದ ಬೆಂಬಲ ಬೇಕಾಗಿತ್ತು. ಈ ಸಂದರ್ಭದಲ್ಲಿ ತಮ್ಮ ೨೪ ಸೀಟುಗಳ ಎಂಪಿಗಳೊಂದಿಗೆ ಜಗಮೀತ್ ಅವರ ಪಕ್ಷ ಟ್ರುಡೊ ಅವರನ್ನು ಬೆಂಬಲಿಸಿತ್ತು.

ಹೀಗಾಗಿ ಟ್ರುಡೊ ಕೆನಡಾದಲ್ಲಿ ಸರ್ಕಾರ ರಚಿಸಲು ಯಶಸ್ವಿಯಾಗಿದ್ದರು. ಆ ಸಂದರ್ಭದಲ್ಲಿ ಟ್ರುಡೊ ಮತ್ತು ಜಗಮೀತ್ ಮಧ್ಯೆ ಸರ್ಕಾರದ ಪೂರ್ಣಾವಧಿ ಅಥವಾ ಮುಂದೆಯೂ ಸಾಧ್ಯವಾದರೆ ಬೆಂಬಲ ನೀದಬೇಕೆಂಬ ಒಡಂಬಡಿಕೆಯಾಗಿತ್ತು. ಆದರೆ ಇದೀಗ ಎಲ್ಲವೂ ತಲೆಕೆಳಗಾಗಿದೆ.

ಎನ್‌ಡಿಪಿ ಶಾಸಕನಾಗಿರುವ ಜಗಮೀತ್ ಕೆನಡಾದ ಫೆಡರಲ್ ರಾಜಕೀಯ ಪಕ್ಷವನ್ನು ಮುನ್ನಡೆಸುವ ಅಲ್ಪಸಂಖ್ಯಾತ ಗುಂಪಿನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಫೆಡರಲ್ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವ ಮೊದಲು, ಸಿಂಗ್ ಅವರು 2011-17 ರಿಂದ ಒಂಟಾರಿಯೊದಲ್ಲಿ ಪ್ರಾಂತೀಯ ಸಂಸತ್ತಿನ (MPP) ಸದಸ್ಯರಾಗಿದ್ದರು.

2021 ರಲ್ಲಿ ಟ್ರೂಡೊ ಅವರ ಲಿಬರಲ್ ಪಕ್ಷವು ಜಗ್ಮೀತ್ ನೇತೃತ್ವದ NDP ಯ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಲು ಸಾಧ್ಯವಾದಾಗ ಟ್ರುಡೊ ಮತ್ತು ಜಗಮೀತ್ ಪ್ರತಿಸ್ಪರ್ಧಿಗಳಿಂದ ಪಾಲುದಾರರಾಗಿ ಹೊರಹೊಮ್ಮಿದ್ದರು.

ಸಿಂಗ್ 2018 ರಲ್ಲಿ ಫ್ಯಾಶನ್ ಡಿಸೈನರ್ ಗುರುಕಿರಣ್ ಕೌರ್ ಅವರನ್ನು ವಿವಾಹವಾದರು ಮತ್ತು ದಂಪತಿಗಳು 2022 ರಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು.

ಬೆಂಬಲ ಹಿಂಪಡೆಯಲು ಕಾರಣ?

ಮಾಧ್ಯಮಗಳ ವರದಿಗಳ ಪ್ರಕಾರ, ಕೆನಡಾದಲ್ಲಿ ಪ್ರಸ್ತುತ ಟ್ರುಡೊ ಅವರ ನೀತಿಗಳು ಸಾಕಷ್ಟು ವೈಫಲ್ಯ ಕಂಡಿದ್ದು ಆರ್ಥಿಕವಾಗಿ ಕೆನಡಾ ಸಾಕಷ್ಟು ಕುಸಿಯುತ್ತಿದೆ. ಕೆನಡಾದ ಯುವಕರಿಗೆ ಕೆಲಸಗಳು ದೊರಕುತ್ತಿಲ್ಲ, ಮನೆಗಳು ದುಬಾರಿಯಾಗಿವೆ. ಕೆನಡಾದ ಸರ್ವತೋಮುಖ ಪ್ರಗತಿ ಕ್ಷಿಣಿಸುತ್ತಿದೆ.

ಇನ್ನೊಂದೆಡೆ ಕೆನಡಾದ ಜನತೆಗೂ ಟ್ರುಡೊ ಮೇಲಿಂದ ಭರವಸೆ ಕಡಿಮೆಯಾಗುತ್ತಿದೆ. ಅವರ ನೀತಿಗಳು, ಅವರು ಭಾರದೊಂದಿಗೆ ನಿರ್ವಹಿಸಿದ ಬಗೆ ಬಗ್ಗೆ ಕೆನಡಾದ ಪ್ರತಿಪಕ್ಷಗಳು ಅಸಮಾಧಾನಗೊಂಡಿವೆ. ಇದೆಲ್ಲ ಕಾರಣಗಳಿಂದಾಗಿ ಮುಂದೆ ನಡೆಯುವ ಚುನಾವಣೆಯಲ್ಲಿ ಟ್ರುಡೊ ಅವರಿಗೆ ಮತಗಳು ಸಿಗುವುದು ಕಷ್ಟ ಎನ್ನಲಾಗುತ್ತಿದ್ದು ಜಗಮೀತ್ ಈ ಬಗ್ಗೆ ಅರಿವನ್ನು ಹೊಂದಿದ್ದಾರೆ.

ಹಾಗಾಗಿ ಅವರು ತಮ್ಮನ್ನು ತಾವು ಸೇಫ್ ಗಾರ್ಡ್ ಮಾಡಿಕೊಳ್ಳುವ ದೃಷ್ಟಿಯಿಂದಲೋ ಅಥವಾ ತಮ್ಮ ರಾಜಕೀಯ ಭವಿಷ್ಯವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದಲೋ ಟ್ರುಡೊ ಅವರಿಗೆ ನೀಡಿದ್ದ ಸಮರ್ಥನೆಯನ್ನು ಹಿಂಪಡೆದಿರುವುದಾಗಿ ಹಲವು ವರದಿಗಳು ಉಲ್ಲೇಖಿಸಿವೆ.

Leave a Reply

Your email address will not be published. Required fields are marked *