ಈ ಐದು ಬಣ್ಣಗಳು ವ್ಯಕ್ತಿಗಳ ವ್ಯಕ್ತಿತ್ವದ ಒಳನೋಟವನ್ನು ಹೇಳುತ್ತವಂತೆ..! ನಿಮಗಿಷ್ಟವಾದ ಬಣ್ಣ ಇವುಗಳಲ್ಲಿದ್ದರೆ ನಿಮ್ಮ ವ್ಯಕ್ತಿತ್ವ ಹೇಗೆ ಎಂದು ನೋಡಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಗೆ ಜಾತಕ ನೋಡಿ ಗ್ರಹಗತಿಗಳನ್ನು ಲೆಕ್ಕ ಹಾಕಿ ಆಯಾ ರಾಶಿಗಳ ಜನರ ವ್ಯಕ್ತಿತ್ವ, ಸ್ವಭಾವ ಹೇಗೆ ಎಂದು ಹೇಳಲಾಗುವುದೋ ಅದೇ ರೀತಿ ಬಣ್ಣಗಳ ಮೂಲಕವೂ ವ್ಯಕ್ತಿತ್ವ ವಿಶೇಷಣಗಳನ್ನು ಹೇಳಬಹುದಾಗಿದೆ.

ಸಾಮಾನ್ಯವಾಗಿ ಬಣ್ಣಗಳು ನಮ್ಮ ಜೀವನದಲ್ಲಿ ಸಂತಸ, ಉತ್ಸಾಹಗಳ ಸಂಕೇತಗಳಾಗಿವೆ. ಅದಕ್ಕೆ ತಿಳಿದವರು ಜೀವನ ಕಪ್ಪು ಬಿಳುಪಿನಂತಿರದೆ ಬಣ್ಣಗಳಿಂದ ಕೂಡಿರಬೇಕು ಅನ್ನುತ್ತಾರೆ, ಬಣ್ಣಗಳೆಂದರೆ ಎಲ್ಲರೂ ಪ್ರೀತಿಸುತ್ತಾರೆ, ಅಂತೆಯೇ ತಮಗಿಷ್ತವಾದ ಯಾವುದಾದರೂ ವಸ್ತು ಈ ಬಣ್ಣದಲ್ಲಿರಬೇಕು, ಆ ಬಣ್ಣದಲ್ಲಿರಬೇಕೆಂದು ಬಯಸುತ್ತಿರುತ್ತಾರೆ.

ಅಂದರೆ ಪ್ರತಿಯೊಬ್ಬರೂ ತಮ್ಮದೆ ಆದ ಇಷ್ಟವಾದ ಬಣ್ಣವನ್ನು ಹೊಂದಿರುತ್ತಾರೆ. ಒಬ್ಬರಿಗೆ ಕೆಂಪು ಇಷ್ಟವಾದರೆ ಇನ್ನೊಬ್ಬರಿಗೆ ಕಪ್ಪು ಬಣ್ಣ ಬಲು ಆಕರ್ಷಕ ಎನಿಸುತ್ತದೆ. ಆದರೆ ನಿಮಗೆ ಗೊತ್ತೆ ನೀವು ಇಷ್ಟಪಡುವ ಬಣ್ಣ ನಿಮ್ಮ ವ್ಯಕ್ತಿತ್ವ ಸ್ವಭಾವಕ್ಕನುಗುಣವಾಗಿರಬಹುದೆಂದು..?

ಹೌದು, ಬಣ್ಣಗಳು ಅವುಗಳನ್ನು ಇಷ್ಟಪಡುವ ವ್ಯಕ್ತಿಯ ಸ್ವಭಾವ, ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತವಂತೆ. ಅಂದರೆ ನಿಮಗೂ ಈಗ ನಿಮ್ಮ ಇಷ್ಟದ ಬಣ್ಣ ನಿಮ್ಮ ಬಗ್ಗೆ ಏನೇನು ಹೇಳುತ್ತದೆ ಎಂಬ ಕುತೂಹಲ ಮೂಡಿರಬೆಕಲ್ಲವೆ..? ಹಾಗಾದರೆ ಈ ಕೆಳಗಿನ ಬಣ್ಣಗಳು ಏನು ಹೇಲುತ್ತವೆ ಎಂಬುದನ್ನು ಓದಿ. ಇವುಗಳಲ್ಲಿ ನಿಮ್ಮ ಇಷ್ಟದ ಬಣ್ಣ ಇದ್ದರೆ ನಿಮ್ಮ ಸ್ವಭಾವ ಎಂತಹದ್ದನ್ನು ಕೂತಲ್ಲೆ ತಿಳಿಯಿರಿ. ಈ ಮೂಲಕ ನೀವು ನಿಮ್ಮನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಅಥವಾ ಹೆಮ್ಮೆ ಪಡಲು ಅವಕಾಶ ಸಿಗಬಹುದು ಅಲ್ಲವೆ..?

ಕೋಬಾಲ್ಟ್ ನೀಲಿ/ನೀಳ:

ಈ ಬಣ್ಣ ಇಷ್ಟಪಡುವವರು ಸಾಮಾನ್ಯವಾಗಿ ಸಹಾನೂಭೂತಿ ಹಾಗೂ ಶಾಂತಚಿತ್ತ ಮನಸ್ಥಿತಿಯನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ. ಅವರು ಉತ್ತಮ ಶಾಂತಿ ಸಂಧಾನಕಾರರು ಹಾಗೂ ಚೆನ್ನಾಗಿ ಮತ್ತೊಬ್ಬರನ್ನು ಆಲಿಸುವಂತಹ ಗುಣವುಳ್ಳವರೂ ಆಗಿರುತ್ತಾರಂತೆ..!

ಅವರು ಸಹಯೋಗ, ನಿಷ್ಠೆಗಳಿಗೆ ಸಾಕಷ್ಟು ಗೌರವ ನೀಡುವವರಾಗಿರುತ್ತಾರೆ ಮತ್ತು ಉತ್ತಮವಾದ ಸಮಯ ಸ್ಥಿರತೆಯನ್ನು ಹೊಂದಿರುತ್ತಾರೆ. ಅವರು ಯಾವುದೇ ರೀತಿಯ ವಿಮರ್ಶೆಗಳಿಗಾಗಲಿ, ಅಥವಾ ವಿವಾದಗಳಿಗಾಗಲಿ ಸೂಕ್ಷ್ಮ ಸ್ವಭಾವವನ್ನು ಹೊಂದಿದ್ದು ಸಾಧ್ಯವಾದಷ್ಟು ಅಂತಹುಗಳನ್ನು ತಪ್ಪಿಸಿಕೊಳ್ಳಲು ನೋಡುತ್ತಾರೆ. ನಂಬಿಕಸ್ಥ ಸ್ನೇಹಿತರನ್ನು ಹೊಂದಲು ಅವರು ಯಾವಾಗಲೂ ಬಯಸುತ್ತಿರುತ್ತಾರೆ.

ಕೆಂಪು:

ನಿಮಗೆ ಈ ಬಣ್ಣ ಇಷ್ಟವಾಗುತ್ತಿದ್ದರೆ ನೀವು ದೃಢ ಮನಸ್ಸಿನವರು, ಮಹತ್ವಾಕಾಂಕ್ಷಿಗಳು ಹಾಗೂ ಫಲಿತಾಂಶ ಉತ್ಸಾಹಿ ವ್ಯಕ್ತಿಗಳಾಗಿರುತ್ತೀರಿ. ನಿಮ್ಮಲ್ಲಿ ಸ್ವಭಾವತಃ ನಾಯಕತ್ವದ ಗುಣಗಳು ಒಡಮೂಡಿರುತ್ತವೆ ಹಾಗೂ ನೀವು ಗುರಿಗಳನ್ನು ತಲುಪುವ ನಿಷ್ಚಿತ ಮನಸ್ಥಿತಿಯನ್ನು ಹೊಂದಿರುತ್ತೀರಿ.

ನಿಮ್ಮ ಮನಸ್ಥಿತಿ ಹೇಗಿರುತ್ತದೆ ಎಂದರೆ ಜೀವನದಲ್ಲಿ ಬರುವ ಸವಾಲುಗಳಿಂದ ನೀವು ಧೈರ್ಯಗೆಡುವುದಿಲ್ಲ ಬದಲಾಗಿ ಅವುಗಳನ್ನು ನಿಭಾಯಿಸಲು ಧೈರ್ಯ ತೋರುತ್ತೀರಿ. ಒತ್ತಡಗಳು ನಿಮ್ಮ ಧೈರ್ಯದ ಮನಸ್ಥಿತಿಯನ್ನು ಎಂದೂ ಹಾನಿಗೊಳಿಸಲಾರವು ಬದಲಾಗಿ ಅವುಗಳನ್ನು ನಿಭಾಯಿಸುವುದನ್ನು ನೀವು ಇಷ್ಟಪಡುತ್ತೀರಿ.

ಹಸಿರು:

ನೀವು ಹಸಿರನ್ನು ಇಷ್ಟಪಡುವವರಾಗಿದ್ದರೆ, ನೀವು ಒಬ್ಬ ಲಾಜಿಕಲ್ ವ್ಯಕ್ತಿ ಎನ್ನಬಹುದು. ನಿಮಗೆ ತಾರ್ಕಿಕ, ಹಾಗೂ ವಿವರಣಾತ್ಮಕವಾಗಿ ವಿಶ್ಲೇಷಿಸುವಂತಹ ವ್ಯಕ್ತಿತ್ವವಿರುತ್ತದೆ. ಅಂದರೆ ನೀವು ಯಾವುದನ್ನೂ ಸುಮ್ಮನೆ ತೆಗೆದುಕೊಳ್ಳುವುದಿಲ್ಲ, ಬದಲಾಗಿ ಅದರ ಅಧ್ಯನವನ್ನು ತರ್ಕಬದ್ಧವಾಗಿ ಮಾಡಿ ಮುಂದುವರಿಯುತ್ತೀರಿ ಎಂದರ್ಥ.

ನಿಮಗೆ ಪರ್ಫೆಕ್ಟ್ ಆಗಿರುವಂತಹ ಅಂಶಗಳೇ ಬೇಕು. ನೀವು ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಮನಸ್ಥಿತಿಯವರಾಗಿದ್ದು ನಿಮ್ಮ ಮೌಅನದಿಂದ ಕೂಡಿರುವ ವ್ಯಕ್ತಿತ್ವವನ್ನು ಒಮ್ಮೊಮ್ಮೆ ಇತರರು ನೋವೊಬ್ಬ ಇಂಟ್ರೋವರ್ಟ್ ಅನ್ನುವಂತೆ ಮಾಡಬಹುದು. ಒಟ್ಟಿನಲ್ಲಿ ನೀವೊಬ್ಬ ಅನಾಲಿಟಿಕಲ್ ಮತ್ತು ಲಾಜಿಕಲ್ ವ್ಯಕ್ತಿ ಎನ್ನಬಹುದು.

ಹಳದಿ:

ಈ ಬಣ್ಣವು ಸೃಜನಾತ್ಮಕತೆಯನ್ನು ಸೂಚಿಸುತ್ತದೆ. ಅಂದರೆ ನಿಮಗೆ ಈ ಬಣ್ಣ ಇಷ್ಟವಿದ್ದಲ್ಲಿ ನೀವೊಬ್ಬ ಸೃಜನಾತ್ಮಕ ಹಾಗೂ ಉತ್ಸಾಹಿ ವ್ಯಕ್ತಿ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಹೊಸ ಹೊಸ ಅನುಭಗಳನ್ನು ನೀವು ಅತ್ಯುತ್ಸಾಹದಿಂದ ಸ್ವಾಗತಿಸುವಂತಹ ನೀವು ಜೀವನದಲ್ಲಿ ಸದಾ ಧನಾತ್ಮಕತೆಯ ಭಾವವನ್ನು ಹೊಂದಿರುತ್ತೀರಿ.

ಸಮಸ್ಯೆ ಪರಿಹರಿಸುವ ಸಂದರ್ಭದಲ್ಲಿ ನೀವು ಸಾಂಪ್ರದಾಯಿಕವಲ್ಲದ ರೀತಿಗಳಲ್ಲೂ ಯೋಚಿಸಿ ಪರಿಹರಿಸುವ ಸಾಮರ್ಥ್ಯ ಹೊಂದಿರುತ್ತೀರಿ. ನಿಮ್ಮಲ್ಲಿರುವ ಉತ್ಸಾಹ ನಿಮ್ಮ ಸುತ್ತಮುತ್ತಲಿರುವವರಿಗೂ ಪ್ರೇರೇಪಿಸುತ್ತದೆ. ಆದರೆ ನೀವು ಕೆಲವೊಮ್ಮೆ ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದುವುದು ಅಗತ್ಯವಾಗಿದೆ.

ಪರ್ಪಲ್:

ಈ ಬಣ್ಣ ಇಷ್ಟಪಡುವವರು ಅರ್ಥಗರ್ಭಿತರೂ, ಕಾಲ್ಪನಿಕರೂ ಹಾಗೂ ದೂರದೃಷ್ಟಿಯುಳ್ಳವರಾಗಿರುತ್ತಾರೆ. ನೀವು ಆಳವಾದ ಅಂತಃಪ್ರಜ್ಞೆಯನ್ನು ಹೊಂದಿದ್ದು ಇತರರ ಭಾವನೆಗಳನ್ನು ಅತ್ಯಂತ ಸಮರ್ಥವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತೀರಿ.

ನಿಮ್ಮಲ್ಲೂ ಸೃಜನಾತ್ಮಕತೆ ಎನ್ನುವುದು ಒಳಗೊಂಡಿದ್ದು ಕಲೆಯ ಹಲವು ವಿಧಗಳ ಮೂಲಕ ನೀವು ಅದನ್ನು ಹೊರಹಾಕುವಲ್ಲಿ ಶಕ್ತರಾಗಿರುತ್ತೀರಿ. ನೀವು ಉತ್ತಮ ದೃಷ್ಟಿ ಹಾಗೂ ಮುಂದಾಲೋಚನೆಯ ಸ್ವಭಾವ ಹೊಂದಿರುವುದರಿಂದ ಭವಿಷ್ಯದ ಯೋಜನೆಗಳನ್ನು ಅದ್ಭುತವಾಗಿ ಯೋಜಿಸಬಲ್ಲವರಾಗಿರುತ್ತೀರಿ.

Leave a Reply

Your email address will not be published. Required fields are marked *