Kannada News Buzz

ಸಲಿಂಗಿಗಳ ವಿವಾಹ ಸಿಂಧುತ್ವದ ಬಗ್ಗೆ ಇಂದು ಕೆಲ ಮಹತ್ವದ ತೀರ್ಪು ನೀಡಿರುವ ಸರ್ವೋಚ್ಛ ನ್ಯಾಯಾಲಯ..! ಹಲವರ ಚಿತ್ತ ಈಗ ತೀರ್ಪಿನತ್ತ

ಸಲಿಂಗಿಗಳ ವಿವಾಹ

Courtesy: Pexels

ಇದೀಗ ಸಲಿಂಗಿಗಳ ವಿವಾಹ ಮಾನ್ಯತೆ ಕುರಿತಂತೆ ಪಂಚ ಸದಸ್ಯರ ಪೀಠ ಕೆಲವು ಮಹತ್ತರ ತೀರ್ಪುಗಳನ್ನು ಈ ಕೆಳಗಿನಂತೆ ನೀಡಿದೆ.

1. ಈ ರೀತಿಯ ವಿಲಕ್ಷಣ ದಾಂಪತ್ಯವು ಸ್ವಾಭಾವಿಕವಾದುದಾಗಿದೆ ಹೊರತು ನಗರೀಕರಣ ಅಥವಾ ಗಣ್ಯರು ಎಂಬ ನೆಲೆಕಟ್ಟು ಹೊಂದಿಲ್ಲ
2. ಸಲಿಂಗಿಗಳ ಅಥವಾ ಇಂತಹ ವಿಲಕ್ಷಣ ಜೋಡಿಗಳ ವಿವಾಹ ಮಾನ್ಯತೆ ಎಂಬುದು ಸಂಸತ್ತು ಹಾಗೂ ರಾಜ್ಯಗಳ ಶಾಸನಸಭೆಗಳು ತೆಗೆದುಕೊಳ್ಳುವ ಅಥವಾ ರೂಪಿಸುವ ಕಾನೂನಿನ ಮೇಲೆ ಅವಲಂಬಿತವಾಗಿದೆ.

ನ್ಯಾ. ಎಸ.ಕೆ. ಕೌಲ್ ಅವರು ಈ ರೀತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

1. ಸಲಿಂಗಿಗಳ ದಾಂಪತ್ಯವನ್ನು ಕಾನೂನಿನಡಿಯಲ್ಲಿ ಗುರುತಿಸಿದಾಗ ಅದು ಮದುವೆ ಸಮಾನತೆಗೆ ಹತ್ತಿರವಾದಂತೆ. ಆದರೆ ಮದುವೆ ಎಂಬುದೇ ಅಂತಿಮವಲ್ಲ. ಇದು ಇನ್ನೊಬ್ಬರ ಹಕ್ಕುಗಳನ್ನು ಉಲ್ಲಂಘಿಸದೆ ಇರುವವರೆಗೂ ಇದರ ಸ್ವಾಯತ್ತತೆಯನ್ನು ಕಾಪಾಡಿಕೊಂಡಿರೋಣ.
2. ಇತರೆ ಸಾಮಾನ್ಯ ದಾಂಪತ್ಯ ಹಾಗೂ ಈ ರೀತಿಯ ವಿಲಕ್ಷಣ ದಾಂಪತ್ಯವನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ನೋಡಬೇಕು.

ಭಾರತದ ಮುಖ್ಯ ನ್ಯಾಯಮೂರ್ತಿಯಾದ ಚಂದ್ರಚೂಡ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಒಂದು ಆಯೋಗವನ್ನು ರಚಿಸಿ ಅದು ಇಂತಹ ವಿಲಕ್ಷಣ ಜೋಡಿಗಳಿಗೆ ದಕ್ಕಬೇಕಾದ ಎಲ್ಲ ಬಗೆಯ ಕಾನೂನು ಹಕ್ಕುಗಳು, ಹಾಗು ಇತರೆ ಸಾಮಾನ್ಯ ಸವಲತ್ತುಗಳ ಸಮಗ್ರ ಅಧ್ಯಯನ ನಡೆಸಬೇಕೆಂದು ಸೂಚಿಸಿದ್ದಾರೆ.

ಭಾರತ ಸಂಸ್ಕೃತಿ-ಸಂಪ್ರದಾಯಗಳು ಇಂದಿಗೂ ಆಚರಣೆಯಲ್ಲಿ ಇರುವಂತಹ ದೊಡ್ಡ ದೇಶ. ಒಂದೆಡೆ ಆಧುನಿಕತೆಯ ಛಾಪು ವ್ಯಾಪಿಸುತ್ತಿದ್ದರೆ ಇನ್ನೊಂದೆಡೆ ಕಟ್ಟಾ ಸಾಂಪ್ರದಾಯಿಕ ಆಚರಣೆಗಳು ಸಮಾಜದಲ್ಲಿ ಅಸ್ತಿತ್ವದಲ್ಲಿವೆ.

ಸಹಜೀವನ, ಸಲಿಂಗಿಗಳ ಮದುವೆ, ಎಲ್ಜಿಬಿಟಿ ಗಳಂತಹ ವಿಷಯಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿದ್ದರೂ ಭಾರತದಂತಹ ದೇಶದಲ್ಲಿ ಈ ವಿಷಯಗಳು ಬಂದಾಗ ಸಾಕಷ್ಟು ಮಡಿವಂತಿಕೆ ಎಂಬುದು ಅಸ್ತಿತ್ವದಲ್ಲಿದೆ.

ಅಲಿಖಿತವಾಗಿ ಇಂತಹ ವಿಷಯಗಳನ್ನು ಯಾರೂ ಸಹ ಸಮಾಜದಲ್ಲಿ ಮುಕ್ತವಾಗಿಯೂ ಚರ್ಚಿಸುವುದಿಲ್ಲ. ಆದರೆ ತಂತ್ರಜ್ಞಾನಗಳ ಪ್ರಗತಿಯಾಗುತ್ತಿರುವಂತಹ ಮಹಾನಗರಗಳಲ್ಲಿ ಇಂತಹ ಸ್ಥಿತಿಯಿಲ್ಲ. ಇಂದಿನ ಯುವಪೀಳಿಗೆ ಈ ಬಗ್ಗೆ ಸಾಕಷ್ಟು ಶಿಕ್ಷಿತರಾಗಿದ್ದು ಇದನ್ನು ಸ್ವಾಭಾವಿಕವಾಗಿಯೇ ತೆಗೆದುಕೊಳ್ಳಬೇಕೆಂಬ ನಿಲುವು ಹೊಂದಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಲಿಂಗಿಗಳ ಮಧ್ಯದ ಮದುವೆಯನ್ನು ಕಾನೂನುಬದ್ಧ ಮಾಡಿ ಅದನ್ನು ಸಿಂಧುತ್ವಗೊಳಿಸಬೇಕೆಂಬ ಅರ್ಜಿಯು ಈಗಾಗಲೇ ಸಲ್ಲಿಕೆಯಾಗಿದ್ದು ಆ ಬಗ್ಗೆ ಕಳೆದ ಮೇ ತಿಂಗಳಿನಲ್ಲಿ ಸಾಲು ಸಾಲಾಗಿ ವಾದ-ಪ್ರತಿವಾದಗಳು ಈಗಾಗಲೇ ಸುಪ್ರೀಂ ನ್ಯಾಯಾಲಯದಲ್ಲಿ ಜರುಗಿದೆ.

ಇದಕ್ಕೆ ಸಂಬಂಧಿಸಿದಂತೆ ಐದು ನ್ಯಾಯಮೂರ್ತಿಗಳುಳ್ಳ ಪಂಚ ಸದಸ್ಯ ಪೀಠವು ತೀರ್ಪನ್ನು ಕಾಯ್ದಿರಿಸಿದ್ದು ಇಂದು ಆ ತೀರ್ಪು ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾರಥಾನ್ ವಿಚಾರಣೆಯ ಸಂದರ್ಭದಲ್ಲಿ, ಮುಕುಲ್ ರೋಹಟಗಿ, ಅಭಿಷೇಕ್ ಮನು ಸಿಂಘ್ವಿ, ರಾಜು ರಾಮಚಂದ್ರನ್, ಆನಂದ್ ಗ್ರೋವರ್, ಗೀತಾ ಲೂತ್ರಾ, ಕೆವಿ ವಿಶ್ವನಾಥನ್, ಸೌರಭ್ ಕಿರ್ಪಾಲ್ ಮತ್ತು ಮೇನಕಾ ಗುರುಸ್ವಾಮಿ ಸೇರಿದಂತೆ ಹಲವು ಅರ್ಜಿದಾರರು ಹಿರಿಯ ವಕೀಲರ ಮೂಲಕ LGBTQIA + ಸಮುದಾಯದ ಸಮಾನತೆಯ ಹಕ್ಕುಗಳನ್ನು ಒತ್ತಿ ಹೇಳಿದ್ದರು ಮತ್ತು ಅದನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದರು.

LGBTQIA ಎಂಬುದು ಭಿನ್ನಲಿಂಗೀಯರಂತೆ “ಗೌರವಯುತ” ಜೀವನವನ್ನು ನಡೆಸುವುದನ್ನು ಖಾತ್ರಿಪಡಿಸುವ ಒಂದು ಒಕ್ಕೂಟವಾಗಿದೆ.

ಏತನ್ಮಧ್ಯೆ, ಭಾರತದ ಶಾಸಕಾಂಗ ನೀತಿಯು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವಿನ ಮಿಲನವನ್ನು ಮಾತ್ರವೇ ಪ್ರಜ್ಞಾಪೂರ್ವಕವಾಗಿ ಮಾನ್ಯ ಮಾಡಿರುವ ಕಾರಣ ಸಲಿಂಗಿಗಳ ಮನವಿಗಳನ್ನು ಕೇಂದ್ರ ವಿರೋಧಿಸುತ್ತಲೇ ಬಂದಿದೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.

ಅಲ್ಲದೆ, ಮೇ 3 ರಂದು, ಇಂತಹ ವಿವಾಹವನ್ನು ಕಾನೂನುಬದ್ಧಗೊಳಿಸುವ ವಿಷಯಕ್ಕೆ ಹೋಗದೆ ಸಲಿಂಗ ದಂಪತಿಗಳ “ನಿಜವಾದ ಕಾಳಜಿ” ಯನ್ನು ಪರಿಹರಿಸಲು ತೆಗೆದುಕೊಳ್ಳಬಹುದಾದ ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಲು ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸುವುದಾಗಿ ಕೇಂದ್ರವು ಉನ್ನತ ನ್ಯಾಯಾಲಯಕ್ಕೆ ತಿಳಿಸಿದೆ.

Exit mobile version