Kannada News Buzz

ವಿನೇಶ್ ಫೋಗಟ್ ಅವರಿಂದ ಭಾರತಕ್ಕೆ ಪದಕವೊಂದು ಖಚಿತ ಅನ್ನುವಷ್ಟರಲ್ಲೇ ನಡೆಯಿತು ಟ್ವಿಸ್ಟ್, ಭಾರತದ ಭರವಸೆಯ ಮಹಿಳಾ ಕುಸ್ತಿಪಟು ಸ್ಪರ್ಧೆಯಿಂದ ಔಟ್..

ವಿನೇಶ್ ಫೋಗಟ್

PhotoCredit: PTI

ನೋಡಿ ಆಟದ ಸ್ಪರ್ಧೆಗಳಲ್ಲಿ ದೈಹಿಕ ಅಂಶಗಳು ಎಷ್ಟು ಪರಿಣಾಮಕಾರಿಯಾಗಿರುತ್ತವೆ ಎಂಬುದಕ್ಕೆ ಇದೀಗ ನಡೆದಿರುವ ಘಟನೆಯೇ ಸಾಕ್ಷಿ ಎನ್ನಬಹುದು. ಅಷ್ಟಕ್ಕೂ ಇತಿಹಾಸದಲ್ಲೆ ಮೊದಲ ಬಾರಿಗೆ ಭಾರತೀಯ ಮಹಿಳಾ ಕುಸ್ತಿಪಟು ಒಬ್ಬಳು (ವಿನೇಶ್ ಫೋಗಟ್) ಫೈನಲ್ ಪ್ರವೇಶಿಸಿದ್ದಳು.

ಈ ಪಂದ್ಯ ಗೆದ್ದಿದ್ದರಂತೂ ಚಿನ್ನ, ಒಂದು ವೇಳೆ ಗೆಲ್ಲದೆ ಹೋದ್ರೂ ಬೆಳ್ಳಿ ಎಂಬಂತಿತ್ತು. ಹಾಗಾಗಿ ಭಾರತೀಯರು ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಹುರುದುಂಬಿಸುತ್ತಿದ್ದರು. ಆದ್ರೆ ಕೊನೆಯ ಹಂತದಲ್ಲಿ ಅವರು ಅಮೆರಿಕದ ಸ್ಪರ್ಧಾಳುವೊಂದಿಗೆ 50 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿಯಬೇಕಾಗಿತ್ತು.

ದುರದೃಷ್ಟವಶಾತ್ ಪಂದ್ಯಾರಂಭಕ್ಕೂ ಮುನ್ನ ಫೋಗಟ್ ಅವರು ನಿಗದಿಪಡಿಸಲಾಗಿದ್ದ 50 ಕೆ.ಜಿ ತೂಕಕ್ಕಿಂತ ಕೇವಲ ನೂರು ಗ್ರಾಂ ಹೆಚ್ಚಾಗಿ ತೂಗಿದ್ದರಿಂದ ಅವರು ಪಂದ್ಯದಿಂದಲೇ ಅನರ್ಹಗೊಳ್ಳಬೇಕಾಯಿತು.

ಪಂದ್ಯಕ್ಕೆ ಗಂಟೆಗಳ ಮೊದಲು ಚಾಂಪ್-ಡಿ-ಮಾರ್ಸ್ ಅರೆನಾದಲ್ಲಿ ಫೋಗಟ್ ಅವರ ತೂಕ ಅಳೆದಾಗ ಅದು ಸ್ವಲ್ಪ ಹೆಚ್ಚು ತೂಕವನ್ನು ಕಂಡುಹಿಡಿದ ನಂತರ ಬುಧವಾರ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು.

ಫೋಗಟ್ ಅವರು ಒಲಿಂಪಿಕ್ ಕುಸ್ತಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದರಿಂದ ಇದು ಇಡೀ ರಾಷ್ಟ್ರಕ್ಕೆ ಆಘಾತವನ್ನುಂಟು ಮಾಡಿದೆ ಎಂದರೆ ತಪ್ಪಾಗದು.

ಆದರೂ ಫೋಗಟ್ ಅವರ ಸಾಧನೆ ಅಪಾರ, ಹಾಗಾಗಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕುಸ್ತಿಪಟುವಿಗೆ ಬೆಂಬಲದ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರೂ ಸಹ “ಚಾಂಪಿಯನ್ ಆಫ್ ಚಾಂಪಿಯನ್” ಎಂದು ಫೋಗಟ್ ಅವರನ್ನು ಕರೆದಿದ್ದು ಅವರಿಗೆ ಪ್ರೇರಣಾದಾಯಕ ನುಡಿಗಳನ್ನು ಹೇಳಿದ್ದಾರೆ.

ಟೀಮ್ ಇಂಡಿಯಾ ಸಹ ಎಕ್ಸ್‌ನಲ್ಲಿ ಈ ಒಂದು ದುಖದ ಸುದ್ದಿಯನ್ನು ಹಂಚಿಕೊಂಡಿದೆ, “ಮಹಿಳಾ ಕುಸ್ತಿ 50 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಅವರ ಅನರ್ಹತೆಯ ಸುದ್ದಿಯನ್ನು ವಿಷಾದದಿಂದ ಹಂಚಿಕೊಳ್ಳುತ್ತಿದ್ದೇವೆ” ಎಂದು ಹೇಳಿದೆ.

ಮುಂದುವರೆಯುತ್ತ ಭಾರತೀಯ ತಂಡವು ಈ ಬಗ್ಗೆ “ರಾತ್ರಿಯುದ್ದಕ್ಕೂ ಫೋಗಟ್ ಅವರ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ, ಅವರು ಇಂದು ಬೆಳಗ್ಗೆ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ಹೆಚ್ಚಿನ ತೂಕವನ್ನು ಹೊಂದಿದ್ದರು.

ಈ ಸಮಯದಲ್ಲಿ ನಮಗೆ ಯಾವುದೇ ಹೆಚ್ಚಿನ ಕಾಮೆಂಟ್‌ಗಳನ್ನು ಮಾಡಲಾಗುವುದಿಲ್ಲ. ಭಾರತ ತಂಡವು ವಿನೇಶ್ ಅವರ ಖಾಸಗಿತನವನ್ನು ಗೌರವಿಸುವಂತೆ ಎಲ್ಲರಲ್ಲೂ ವಿನಂತಿಸುತ್ತದೆ ಹಾಗೂ ನಮ್ಮ ಮುಂದೆ ಸದ್ಯ ಕೈಯಲ್ಲಿರುವ ಸ್ಪರ್ಧೆಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತದೆ, ”ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಒಂದೊಮ್ಮೆ ವಿನೇಶ್ ಫೋಗಟ್ ಅವರ ಅನರ್ಹತೆಯ ಸುದ್ದಿ ಹೊರಬಂದದ್ದೇ ತಡ, ವಿನೇಶ್ ಫೋಗಟ್ ಹೆಸರು ಭಾರತದಲ್ಲಿ ಗೂಗಲ್‌ನಲ್ಲಿ ಟ್ರೆಂಡಿಂಗ್ ಆಗಲು ಪ್ರಾರಂಭಿಸಿತು, “ವಿನೇಶ್ ಫೋಗಟ್ ಪದಕ ಪಡೆಯುತ್ತಾರೆಯೇ?” ಎಂಬ ಪ್ರಶ್ನೆ ಸಾಕಷ್ಟು ಟ್ರೆಂಡ್ ಆಯಿತು.

ಇನ್ನು ಈ ಪ್ರಶ್ನೆಗೆ ಉತ್ತರಿಸಬೇಕೆಂದರೆ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ನಿಯಮಪುಸ್ತಕ ನೋಡಬೇಕು. ಅದರಲ್ಲಿ ಹಾಕಿದ ಅಂತರಾಷ್ಟ್ರೀಯ ಕುಸ್ತಿ ನಿಯಮಗಳನ್ನು ನಾವು ಪರಿಶೀಲಿಸಿದಾಗ ನಿಯಮಗಳ ಪ್ರಕಾರ, ಫೋಗಟ್ ಪದಕವಿಲ್ಲದೆ ಭಾರತಕ್ಕೆ ಮರಳುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದುಬರುತ್ತದೆ.

ನಿಯಮಗಳನುಸಾರ “ಕ್ರೀಡಾಪಟುಗಳು ಭಾಗವಹಿಸದಿದ್ದರೆ ಅಥವಾ ತೂಕದಲ್ಲಿ ವಿಫಲವಾದರೆ (1 ನೇ ಅಥವಾ 2 ನೇ ತೂಕದಲ್ಲಿ), ಅವರು ಸ್ಪರ್ಧೆಯಿಂದ ಹೊರಹಾಕಲ್ಪಡುತ್ತಾರೆ ಮತ್ತು ಶ್ರೇಣಿಯಿಲ್ಲದೆ ಕೊನೆಯ ಸ್ಥಾನದಲ್ಲಿರುತ್ತಾರೆ ಹೀಗೆಂದು ಅಮರಿಕದ (ವಿನಾಯಿತಿ: cf. ಲೇಖನ 56 – ವೈದ್ಯಕೀಯ ಸೇವೆಯ ಮಧ್ಯಸ್ಥಿಕೆ), ” ನಿಯಮಾವಳಿಯ ಆರ್ಟಿಕಲ್ 11 ಹೇಳುತ್ತದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ನಿನ್ನೆಯವರೆಗೂ ಆಕೆಗೆ ಬೆಳ್ಳಿ ಪದಕವಾದರೂ ಖಚಿತವಾಗಿತ್ತು. ಆದರೆ ಇದೀಗ ಯಾವುದೇ ಪದಕ ಸಿಗದೆ ಇರುವುದು ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಸಾಕಷ್ಟು ಬೇಸರವಂತೂ ಮೂಡಿದೆ ಎನ್ನಬಹುದು.

29 ವರ್ಷದ ಕುಸ್ತಿಪಟು 100 ಗ್ರಾಂ ಅಧಿಕ ತೂಕ ಹೊಂದಿರುವುದನ್ನು ಕಂಡುಹಿಡಿದ ನಂತರ “100 ಗ್ರಾಂ” X (ಹಿಂದೆ Twitter) ನಲ್ಲಿ ಭಾರತದಲ್ಲಿ ಟ್ರೆಂಡಿಂಗ್ ಆಗಿದೆ.

ಈ ಹಿಂದೆ ಫೋಗಟ್ ಮಂಗಳವಾರ ಹಾಲಿ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿ ಅವರನ್ನು ಸೋಲಿಸಿ ಅಮೆರಿಕದ ಸಾರಾ ಆನ್ ಹಿಲ್ಡೆಬ್ರಾಂಡ್ ವಿರುದ್ಧ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು.

ಇದೀಗ ಸೆಮಿಫೈನಲ್‌ನಲ್ಲಿ ಫೋಗಟ್‌ಗೆ ಸೋತಿದ್ದ ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮನ್ ಲೋಪೆಜ್, ಅವರ ಅದೃಷ್ಟ ಖುಲಾಯಿಸಿದ್ದು ಚಿನ್ನದ ಪದಕದ ಪಂದ್ಯದಲ್ಲಿ ಅವರ ಸ್ಥಾನವನ್ನು ಪಡೆದಿದ್ದಾರೆ.

Exit mobile version