Kannada News Buzz

ನಿಮ್ಮ ಸಂಗಾತಿ ವೃಶ್ಚಿಕ ರಾಶಿಯೆ? ಈ ಭಾವ ತೀವ್ರತೆಯ ರಾಶಿ ಚಿಹ್ನೆಯ ಜನರು ಸಂಬಂಧ ಅಂತ ಬಂದಾಗ ಹೀಗಿರುತ್ತಾರೆ…

Scorpio

ಇಟಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪಂಡಿತ್ ಜಗನ್ನಾಥ್ ಗುರುಜಿ ಅವರು ವೃಶ್ಚಿಕ ರಾಶಿಯ ಗುಣಧರ್ಮ ಅಥವಾ ವ್ಯಕ್ತಿ ವಿಶೇಷ ಸ್ವಭಾವ ಪ್ರಧಾನವಾಗಿ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ತಿಳಿಸಿದ್ದಾರೆ.

ಜ್ಯೋತಿಷ್ಯ ಶಾಸ್ತ್ರವು ಬಲು ಪ್ರಾಚೀನವಾಗಿದ್ದು ಬಹಳಷ್ಟು ಜನರ ಜೀವನದಲ್ಲಿ ಹಾಸುಹೊಕ್ಕಿದೆ ಎಂದರೆ ತಪ್ಪಾಗದು. ಇಂದಿಗೂ ಅನೇಕ ಜನರು ತಮ್ಮ ನಿತ್ಯ ರಾಶಿಫಲ ಪರಿಗಣಿಸಿಯೇ ಅಂದಿನ ಕೆಲಸಕ್ಕೆ ಹಾಕುತ್ತಾರೆ ಎಂದರೆ ನಂಬಲೇಬೇಕು. ಅಲ್ಲದೆ ಈ ಶಾಸ್ತ್ರದಲ್ಲಿ ಹನ್ನೆರಡು ರಾಶಿ ಚಕ್ರಗಳಿದ್ದು ಪ್ರತಿ ರಾಶಿ ತನ್ನದೆ ಆದ ವಿಶಿಷ್ಟತೆ, ಗುಣಧರ್ಮ ಹೊಂದಿರುತ್ತವೆ ಎನ್ನಲಾಗಿದೆ.

ಪ್ರಧಾನವಾಗಿ ಪ್ರತಿ ರಾಶಿ ಕೆಲ ವ್ಯಕ್ತಿ ವಿಶೇಷಣ ಸ್ವಭಾವಗಳನ್ನು ಹೊಂದಿದ್ದು ಆಯಾ ರಾಶಿಗಳ ಜನರು ಆ ರಾಶಿಗಳ ಪ್ರಭಾವವನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ. ಈ ಲೇಖನದಲ್ಲಿ ರಹಸ್ಯಮಯ ರಾಶಿ ಎಂದೇ ಗುರುತಿಸಲ್ಪಡುವ ವೃಶ್ಚಿಕ ರಾಶಿಗರ ಅದರಲ್ಲೂ ಸಂಬಂಧದ ವಿಷಯದಲ್ಲಿ ಅವರು ಯಾವ ರೀತಿಯ ವಿಶೇಷಣ ಅಥವಾ ಸ್ವಭಾವ ಹೊಂದಿರುತ್ತಾರೆ ಎಂದು ಹೇಳಲಾಗಿದೆ.

ಇಟಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪಂಡಿತ್ ಜಗನ್ನಾಥ್ ಗುರುಜಿ ಅವರು ವೃಶ್ಚಿಕ ರಾಶಿಯ ಗುಣಧರ್ಮ ಅಥವಾ ವ್ಯಕ್ತಿ ವಿಶೇಷ ಸ್ವಭಾವ ಪ್ರಧಾನವಾಗಿ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ತಿಳಿಸಿದ್ದಾರೆ.

ನೀವು ವೃಶ್ಚಿಕ ರಾಶಿಯವರಾಗಿದ್ದರೆ ಅಥವಾ ನಿಮ್ಮ ಸಂಗಾತಿ ವೃಶ್ಚಿಕ ರಾಶಿಯವರಾಗಿದ್ದರೆ ನೀವು ಓದಲೇಬೇಕಾದ ಲೇಖನವಿದು. ಹಾಗಾದರೆ ಬನ್ನಿ ತಡಮಾಡದೆ ರಾಶಿ ಗುಣಧರ್ಮದ ಬಗ್ಗೆ ಒಂದೊಂದಾಗಿ ತಿಳಿಯುತ್ತ ಹೋಗೋಣ.

ವೃಶ್ಚಿಕ ರಾಶಿ

* ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ಭಾವೋದ್ರಿಕ್ತ ಗುಣ ಹೊಂದಿದವರಾಗಿದ್ದು ಈ ರಾಶಿಯ ಸಂಗಾತಿಗಳು ತಮ್ಮ ಜೊತೆಗಾರರ ಜೊತೆ ಅತಿ ನಿಷ್ಠೆ ಹಾಗೂ ಶೃದ್ಧೆಯನ್ನು ಹೊಂದಿರುತ್ತಾರೆ. ಅವರ ಆಳವಾದ ಭಾವನಾತ್ಮಕ ತುಡಿತಗಳು, ಬಲವಾದ ಅಂತಃಪ್ರಜ್ಞೆಯ ಗುಣಗಳು ಅವರನ್ನು ಒಬ್ಬ ಬದ್ಧನಾಗಿರುವ ಸಂಗಾತಿ ಎಂಬ ಹಿರಿಮೆಯನ್ನು ತಂದುಕೊಡುತ್ತದೆ.

ಅವರು ತಮ್ಮ ಸಂಗಾತಿಯೊಂದಿಗೆ ಕೇವಲ ನಿಷ್ಠೆ ಮಾತ್ರ ಹೊಂದಿರುವುದಲ್ಲದೆ ಸಾಕಷ್ಟು ಶೃದ್ಧೆಯನ್ನು ಸಹ ಹೊಂದಿರುವುದರಿಂದ ಪರಸ್ಪರರ ಮಧ್ಯೆ ಒಂದು ಅನನ್ಯವಾದಂತಹ ಬಂಧವನ್ನೇ ನಿರ್ಮಿಸಿರುತ್ತಾರೆ ಅನ್ನಬಹುದು.

* ಅವರು ತಮ್ಮ ಸಂಗಾತಿಯೊಂದಿಗೆ ತೀವ್ರವಾದ ಭಾವ ಹೊಂದಿರುವಂತಹ ಪ್ರೇಮವನ್ನು ಹೊಂದಿರುತ್ತಾರೆ. ಅವರ ಪ್ರೀತಿ ಸಾಕಷ್ಟು ಇಂಟೆನ್ಸ್ ಆಗಿರುತ್ತದೆ. ತಮ್ಮ ಸಂಪೂರ್ಣ ಹೃದಯವನ್ನೇ ಅವರು ತಮ್ಮ ಸಂಗಾತಿಗಾಗಿ ಅರ್ಪಿಸುವ ಮನೋಭಾವ ಹೊಂದಿರುತ್ತಾರೆ.

ಅವರ ಈ ನಡತೆಯಿಂದ ಅವರ ಸಂಗಾತಿ ತಮ್ಮನ್ನು ತಾವು ಅತ್ಯಂತ ಅದೃಷ್ಟವಂತ/ವಂತೆ ಎಂದು ಅಂದುಕೊಳ್ಳದೆ ಇರುವುದಕ್ಕೆ ಯಾವುದೇ ಕಾರಣವಿಲ್ಲ. ಅವರ ಅತಿಯಾಳವಾದ ಪ್ರೀತಿ ಹಾಗೂ ಅದನ್ನು ಅಷ್ಟೇ ಅದ್ಭುತವಾಗಿ ವ್ಯಕ್ತಪಡಿಸುವ ರೀತಿ ಸಂಗಾತಿಗೆ ಅತ್ಯಂತ ಮಧುರವಾದ ಭಾವನೆ ಹೊಂದುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ.

* ಮೊದಲೇ ಹೇಳಿರುವ ಹಾಗೆ ವೃಶ್ಚಿಕ ರಾಶಿಗರು ತಮ್ಮ ಬಲವಾದ ನಿಷ್ಠೆ ಹಾಗೂ ಕಮಿಟ್ಮೆಂಟ್ ಸ್ವಭಾವಕ್ಕೆ ಪ್ರಸಿದ್ದರು. ಒಂದೊಮ್ಮೆ ಅವರು ನಿಮ್ಮನ್ನು ಒಪ್ಪಿಕೊಂಡರೆ ಮುಗಿತು ಕೊನೆಯವರೆಗೂ ನಿಮ್ಮ ಜೊತೆ ಒಂದೇ ರೀತಿಯ ಬಾಂಧವ್ಯದಲ್ಲಿರುತ್ತಾರೆ. ತಮ್ಮ ಪ್ರೀತಿಪಾತ್ರರ ಆರೈಕೆ ಹಾಗೂ ಸಂತಸಕ್ಕಾಗಿ ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಲು ಸಿದ್ಧರಿರುತ್ತಾರೆ.

ಇಲ್ಲಿ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಅವರ ಈ ನಿಷ್ಠೆ ಹಾಗೂ ಪ್ರೀತಿಸುವ ಸ್ವಭಾವ ಕೇವಲ ಮಡದಿ ಅಥವಾ ಗಂಡನಿಗೆ ಮಾತ್ರವಲ್ಲ ಬದಲಾಗಿ ಕುಟುಂಬ ಸದಸ್ಯರ ಹಾಗೂ ಸಹೋದರ ಸಹೋದರಿಯರ ಪ್ರತಿಯು ಹಾಗೆಯೇ ಇರುತ್ತದೆ ಎನ್ನಬಹುದು.

* ಇನ್ನೊಂದು ಈ ರಾಶಿಗರ ಅಗ್ರಮಾನ್ಯ ಗುಣವೆಂದರೆ ಇವರಿ ಇನ್ನೊಬ್ಬರ ಮನಸ್ಸನ್ನು ಸರಾಗವಾಗಿ ಓದಬಹುದು. ಹಾಗಾಗಿ ಸಂಗಾತಿಗೆ ಬೇಸರವಾದಾಗ ಅಥವಾ ಹತಾಶೆಗೊಂಡಾಗ ಅವರಿಗೆ ಯಾವಾಗ ಯಾವ ರೀತಿ ಬೆಂಬಲ ನೀಡಬೇಕು ಅಥವಾ ಹೆಗಲು ಕೊಡಬೇಕು ಎಂಬುದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ.

ಹಾಗಾಗಿ ಅವರು ತಮ್ಮ ಪ್ರೀತಿಗಿಂತ ಮಿಗಿಲಾಗಿ ಮತ್ತೊಂದು ಯಾವ ವಿಷಯವನ್ನು ಒಪ್ಪುವುದಿಲ್ಲ. ಆದ್ದರಿಂದ ಎಂಥದ್ದೆ ಕಷ್ಟದ ಪರಿಸ್ಥಿತಿ ಇದ್ದರೂ ಈ ರಾಶಿಯ ಸಂಗಾತಿ ಪಡೆದವರು ನೆಮ್ಮದಿಯಾಗಿರಬಹುದು ಏಕೆಂದರೆ ಅವರ ಬೆನ್ನುಲುಬಾಗಿ ಅವರು ಸದಾ ನಿಂತಿರುತ್ತಾರೆ.

ವೃಶ್ಚಿಕ ರಾಶಿಗರೆ ಗಮನಿಸಿ

ಈ ಮೇಲೆ ತಿಳಿಸಿರುವಂತೆ ನೀವು ಸಾಕಷ್ಟು ಭಾವ ತೀವ್ರತೆ ಹೊಂದಿರುತ್ತೀರಿ, ಅತಿಯಾಗಿ ನಿಷ್ಠೆ ಹಾಗೂ ಬದ್ಧತೆಯನ್ನು ಹೊಂದಿರುತ್ತೀರಿ. ಈ ಗುಣವು ಒಮ್ಮೊಮ್ಮೆ ನೀವು ಕುಗ್ಗುವಂತೆ ಮಾಡಬಹುದು, ವಿಶೇಷವಾಗಿ ನಿಮ್ಮ ಪ್ರೀತಿಪಾತ್ರರು ನಿಮಗೆ ಸಲ್ಲಬೇಕಾದಂತಹ ಬೆಲೆ ನೀಡದೆ ಇದಾಗ. ಹಾಗಾಗಿ ಜೀವನದಲ್ಲಿ ಒಂದು ರೀತಿಯ ಸಮತೋಲನ ಕಾಯುವುದು ಉತ್ತಮ. ನಿಮ್ಮ ಭಾವನೆಗಳು ಒಪ್ಪುವಂಥದ್ದೆ ಆದರೂ ಕೊಂಚ ನಿಯಂತ್ರಣ ಹೊಂದುವುದು ಒಳ್ಳೆಯದು, ಏಕೆಂದರೆ ಒಮ್ಮೊಮ್ಮೆ ಇದು ನಿಮ್ಮನ್ನು ಜೆಲಸಿ ಪಡುವಂತೆಯೂ ಮಾಡಬಹುದು. ನಿಮ್ಮ ಅಪಾರ ಪ್ರೀತಿ ನಿಮ್ಮ ಸಂಗಾತಿಯ ಬಗ್ಗೆ ನೀವು ಪೊಸ್ಸೆಸ್ಸಿವ್ ಆಗುವಂತೆಯೂ ಮಾಡಬಹುದು.

Exit mobile version