Kannada News Buzz

ಉಕ್ರೇನ್ ನಿಂದ ಮಾಸ್ಕೊ ಮೇಲೆ ಮೂರು ಡ್ರೋನ್ ಗಳಿಂದ ದಾಳಿ – ರಷ್ಯನ್ ರಕ್ಷಣಾ ಸಚಿವಾಲಯ

ಮಾಸ್ಕೊ ಸಾಂದರ್ಭಿಕ ಚಿತ್ರ

ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗಿ ವರ್ಷವೇ ಗತಿಸಿದರೂ ಇಂದಿಗೂ ಅದು ನಿಲ್ಲುವ ಸೂಚನೆ ಕಾಣುತ್ತಲೇ ಇಲ್ಲ. ಪ್ರಸ್ತುತ ಸಂದರ್ಭದಲ್ಲಿ ಮೊದಲಿನಂತಹ ತೀವ್ರವಾದ ದಾಳಿಗಳು ನಡೆಯುತ್ತಿಲ್ಲವಾದರೂ ಆಗೊಮ್ಮೆ ಈಗೊಮ್ಮೆ ಎರಡೂ ಪಡೆಗಳಿಂದ ದಾಳಿ ಆಗುತ್ತಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ.

ಇದೀಗ ನಡೆದ ಹೊಸ ವಿದ್ಯಮಾನವೊಂದರಲ್ಲಿ ಉಕ್ರೇನ್ ನಿಂದ ರಷ್ಯಾ ರಾಜಧಾನಿ ಮಾಸ್ಕೊ ಮೇಲೆ ಡ್ರೋನ್ ದಾಳಿ ಆಗಿರುವ ಬಗ್ಗೆ ವರದಿಯಾಗಿದೆ. ಭಾನುವಾರದ ಬೆಳಗಿನ ಸಮಯದಲ್ಲಿ ಉಕ್ರೇನ್ ಮಾಸ್ಕೊ ನಗರದ ಮೇಲೆ ಡ್ರೋನ್ ಬೀಳಿಸಿರುವುದಾಗಿ ರಷ್ಯನ್ ರಕ್ಷಣಾ ಸಚಿವಾಲಯ ದೃಢಶಪಡಿಸಿದೆ ಎಂದು ಟೈಮ್ಸ್ ಮಾಧ್ಯಮ ವರದಿ ಮಾಡಿದೆ.

ಸದ್ಯ ವರದಿಯಾಗಿರುವಂತೆ, ಉಕ್ರೇನ್ ನಿಂದ ದಾಳಿ ಮಾಡಲಾಗಿರುವ ಮೂರು ಡ್ರೋನ್ ಗಳ ಪೈಕಿ ಒಂದನ್ನು ನಗರದ ಹೊರವಲಯದಲ್ಲಿ ಹೊಡೆದುರುಳಿಸಲಾಗಿದ್ದರೆ ಮಿಕ್ಕ ಎರಡು ಡ್ರೋನ್ ಗಳು ಕಚೇರಿ ಸಂಕೀರ್ಣವೊಂದರ ಮೇಲೆ ಬಿದ್ದಿರುವುದಾಗಿ ವರದಿಯಾಗಿದೆ. ಯಾವುದೇ ರೀತಿಯ ಸಾವು ಅಥವಾ ಗಾಯದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದುಬಂದಿದೆ.

ಭಾನುವಾರದಂದು ನಡೆದ ಈ ಡ್ರೋನ್ ದಾಳಿ ಪ್ರಸ್ತುತ ಇತ್ತೀಚೆಗೆ ನಡೆದ ಡ್ರೋನ್ ದಾಳಿಗಳ ಪೈಕಿ ತೀರಾ ಇತ್ತೀಚಿನದು ಎಂದು ತಿಳಿದುಬಂದಿದೆ. ಅಷ್ಟಕ್ಕೂ ಮಾಸ್ಕೊ ಉಕ್ರೇನ್ ನಿಂದ ಸುಮಾರು ೫೦೦ ಕಿ.ಮೀ ಗಳಷ್ಟು ದೂರವಿದ್ದು ಎರಡು ಪಡೆಗಳ ಯುದ್ಧದಲ್ಲಿ ಈ ವರ್ಷದಲ್ಲಿ ಹೆಚ್ಚುಕಡಿಮೆ ಆರಂಭವಾಗಿರುವಂತೆ ಮಾಸ್ಕೊದ ಮೇಲೆ ದಾಳಿಯಾಗಿದ್ದು ಅಪರೂಪವೇ ಆಗಿದೆ.

ಇತ್ತೀಚೆಗೆ ಉಕ್ರೇನ್ ಗಡಿಗೆ ಹತ್ತಿರವಿರುವ ರಷ್ಯಾದ ಕೆಲ ನಗರಗಳು ಹಾಗೂ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿಗಳನ್ನು ಮಾಡಲಾಗಿದ್ದು ಉಕ್ರೇನಿನ ಕೀವ್, ಈ ಎಲ್ಲ ದಾಳಿಗೆ ಕಾರಣ ಎಂದು ರಷ್ಯಾ ಆರೋಪಿಸಿದೆ. ರಷ್ಯಾದ ರಕ್ಷಣಾ ಸಚಿವಾಲಯ ಇದನ್ನು “ಆತಂಕಿ ದಾಳಿ” ಎಂದು ಜರಿದಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ರಕ್ಷಣಾ ಸಚಿವಾಲಯ, ಜುಲೈ ೩೦ ರ ಭಾನುವಾರದ ಬೆಳಗಿನ ಸಮಯದಂದು ಕೀವ್ ಆಡಳಿತವು ರಷ್ಯಾದ ಮಾಸ್ಕೊ ನಗರವನ್ನು ಗುರಿ ಮಾಡಿಕೊಂಡು ಮಾನವರಹಿತ ವೈಮಾನಿಕ ಉಪಕರಣಗಳಿಂದ ಆತಂಕಿ ದಾಳಿ ಮಾಡಲು ಪ್ರಯತ್ನಿಸಿದೆ.”

ಉಕ್ರೇನಿನ ಒಂದು ಶಸ್ತ್ರಸಜ್ಜಿತ ಮಾನವರಹಿತ ವೆಹಿಕಲ್ ಅನ್ನು ಮಾಸ್ಕೊ ಹೊರ ಪ್ರದೇಶದ ಒಡಿಂತ್ಸೊವೊ ಜಿಲ್ಲೆಯ ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ. ಮಿಕ್ಕ ಎರಡು ಡ್ರೋನ್ ಗಳು ಎಲೆಕ್ಟ್ರಾನಿಕ್ ವಾರ್ ಫೇರ್ ವ್ಯವಸ್ಥೆಯಿಂದ ಸಪ್ರೆಸ್ ಆಗಿ ನಿಯಂತ್ರಣ ಕಳೆದುಕೊಂಡು ಮಾಸ್ಕೊ ನಗರದ ಜನರಹಿತ ಕಟ್ಟಡವೊಂದರ ಮೇಲೆ ಬಿದ್ದಿವೆ ಎಂದು ಸಚಿವಾಲಯ ತಿಳಿಸಿದೆ.

ಇನ್ನು ದಾಳಿಗೆ ಒಳಪಟ್ಟ ನಗರದ ಮೇಯರ್ ಆಗಿರುವ ಸೆರ್ಗೈ ಸೊಬ್ಯಾನಿನ್ ಅವರು ಟೆಲಿಗ್ರಾಮ್ ಖಾತೆಯ ಮೂಲಕ ಹೇಳಿಕೆ ನೀಡಿದ್ದು, “ಎರಡು ಅವಳಿ ಕಟ್ಟಡಗಳ ಮುಂಭಾಗಗಳು ಭಾಗಶಃ ಹಾನಿಗೊಳಗಾಗಿವೆ, ಯಾವುದೇ ರೀತಿಯ ಸಾವು-ನೋವು ಸಂಭವಿಸಿಲ್ಲ” ಎಂದಿದ್ದಾರೆ.

ರಷ್ಯನ್ ಮಾಧ್ಯಮ ವರದಿ ಮಾಡಿರುವಂತೆ ರಾಜಧಾನಿಯ Vnukovo ವಿಮಾನ ನಿಲ್ದಾಣವು ಘಟನೆ ನಡೆದ ತಕ್ಷಣ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿ ಅಲ್ಲಿನ ವಿಮಾನಗಳಿಗೆ ಬೇರೆ ಏರ್ಪೋರ್ಟ್ ಗಳಿಗೆ ನಿರ್ದೇಶಿಸಿತು ಎನ್ನಲಾಗಿದ್ದು ಒಂದು ಗಂಟೆಯ ನಂತರ ಮತ್ತೆ ಸ್ಥಿತಿಗತಿಗಳು ಸಾಮಾನ್ಯ ಹಂತಕ್ಕೆ ತಿರುಗಿದವು ಎನ್ನಲಾಗಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ರಷ್ಯಾ ವಿದೇಶಾಂಗ ಸಚಿವಾಲಯವು ಅಮೆರಿಕ ಅಥವಾ ನ್ಯಾಟೊ ಪಾಲುದಾರರ ಸಹಾಯವಿಲ್ಲದೆ ಉಕ್ರೇನ್ ಈ ರೀತಿಯ ದಾಳಿ ನಡೆಸಲು ಸಾಧ್ಯವಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಅಮೆರಿಕ ಮತ್ತು ನ್ಯಾಟೊಡಾ ಹಸ್ತಕ್ಷೇಪದ ಬಗ್ಗೆ ತಿರುಗೇಟು ನೀಡಿದ್ದಾರೆ.

ಅಲ್ಲದೆ ಶುಕ್ರವಾರದಂದು ಸಹ ಎರಡು ಕ್ಷಿಪಣಿಗಳನ್ನು ರಷ್ಯನ್ ಪಡೆ ಹೊಡೆದುರುಳಿಸಿದ್ದು ಅದರ ಅವಶೇಷಗಳು ಕೆಳಗೆ ಬೀಳುವ ಮೂಲಕ ಕನಿಷ್ಠ ಹದಿನಾರು ಜನ ಗಾಯಗೊಂಡಿರುವುದಾಗಿ ರಷ್ಯಾ ಹೇಳಿದ್ದಾರೆ ರಷ್ಯಾದ ಗಡಿಯಾಚೆಗೆ ರಷ್ಯಾ ನಡೆಸಿದ ದಾಳಿಯ ಪರಿಣಾಮ ಜ್ಯಾಪೋರಿಚ್ಚಿಯಾದಲ್ಲಿ ಇಬ್ಬರು ಹತರಾಗಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಎರಡೂ ಪಡೆಗಳಿಂದ ಈಗಲೂ ದಾಳಿಗಳು ಮುಂದುವರೆದಿದ್ದು ಅಮಾಯಕ ಜನರು ಬಲಿಪಶುಗಳಾಗುತ್ತಿರುವುದು ದುರದೃಷ್ಟಕರ ಎನ್ನಬಹುದಾಗಿದೆ. ಆದಷ್ಟು ಶೀಘ್ರ ಈ ಯುದ್ಧಕ್ಕೆ ವಿರಾಮ ಬೀಳಲಿ ಎಂಬುದೇ ನಮ್ಮ ಪ್ರಾರ್ಥನೆ.

Exit mobile version