Kannada News Buzz

ಈ ಹಣ್ಣುಗಳನ್ನು ನಿಮ್ಮ ಮನೆಯಲ್ಲೇ ಈ ರೀತಿ ಬೆಳೆಸಿ

ಹಣ್ಣುಗಳು ಪ್ರಕೃತಿ ನಮಗೆ ನೀಡಿರುವ ರುಚಿಕರವಾದ ಹಾಗೂ ಪೋಷಕ ತತ್ವಗಳುಳ್ಳ ಅದ್ಭುತ ಉತ್ಪನ್ನಗಳಾಗಿವೆ. ಮಕ್ಕಳಿಂದ ಹಿಡಿದು ವಯಸ್ಸಾದವರೂ ಸಹ ಹಣ್ಣುಗಳನ್ನು ಬಾಯಿ ಚಪ್ಪರಿಸಿ ತಿನುತ್ತಾರೆ, ಕಾರಣ ಅವು ನೈಸರ್ಗಿಕ ಸಿಹಿಕಾರಕಗಳಾಗಿರುವುದಲ್ಲದೆ ಒಳ್ಳೆಯ ಘಮ ಹಾಗೂ ಆರೋಗ್ಯವರ್ಧಕ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ.

ಈಗಿನ ಕಾಲದಲ್ಲಿ ಎಲ್ಲೆಡೆ ಸಿಗುವ ಪ್ರತಿಯೊಂದು ಹಣ್ಣುಗಳು ಪಾಕೃತಿಕವಾಗಿಯೇ ಪಕ್ವವಾಗಿರುತ್ತವೆ ಎಂದು ಹೇಳಲು ಆಗದು, ಕೆಲವರು ರಾಸಾಯನಿಕ ಅಂಶಗಳನ್ನು ಬಳಸಿ ಅವು ತ್ವರಿತವಗಿ ಪಕ್ವವಾಗುವಂತೆ ಮಾಡಿರುತ್ತಾರೆ. ಇಂತಹ ಹಣ್ಣುಗಳನ್ನು ಸೇವಿಸಿದಾಗ ಅವು ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತವೆ. ಹಾಗಾಗಿ ಕೆಲವರಿಗೆ ಮನೆಯಲ್ಲೇ ಹಣ್ಣುಗಳನ್ನು ಬೆಳೆಸುವ ಬಯಕೆಯಿರುತ್ತದೆ.

ನಿಮ್ಮ ಮನೆಯಲ್ಲೂ ಸಹ ಸ್ಥಳವಿದೆ ಹಾಗೂ ನಿಮಗೂ ಮನೆಯಲ್ಲೇ ಹಣ್ಣುಗಳನ್ನು ಯಾವ ರೀತಿ ಬೆಳೆಸಬೇಕು ಎಂಬ ತಿಳಿಯುವ ಬಯಕೆ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

Orange fruit (Pexels)

ಆರೆಂಜ್

ಸಿ ಜೀವಸತ್ವದಿಂದ ಸಮೃದ್ಧವಾಗಿರುವ ಈ ಹಣ್ಣು ಸಾಕಷ್ಟು ಜನಪ್ರಿಯವಾದ ಹಣ್ಣಾಗಿದೆ. ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಪೋಷಕ ತತ್ವಗಳುಳ್ಳ ಈ ಹಣ್ಣುಗಳನ್ನು ನೀವು ಮನೆಯಲ್ಲೇ ಬೆಳೆಸಲು ಬಯಸಿದರೆ, ಹೀಗೆ ಮಾಡಿ.

ನೀವು ಮನೆಗೆ ತಂದಿರುವ ಆರೆಂಜ್ ಹಣ್ಣನ್ನು ತಿಂದಾದ ಮೇಲೆ ಅದರಲ್ಲಿರುವ ಬೀಜವನ್ನು ಎಸೆಯಬೇಡಿ. ಅದರಲ್ಲಿರುವ ತಾಜಾ ಬೀಜವನ್ನು ಆಯ್ಕೆ ಮಾಡಿ. ಆ ಬೀಜ ಅಂಕು ಡೊಂಕಾಗಿರದೆ ಸರಿಯಾದ ಆಕಾರ ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ ಹಾಗೂ ಅದರ ಬಣ್ಣವು ಬದಲಾಗಿರದಂತಹ ಬೀಜ ಆಯ್ಕೆ ಮಾಡಿ.

ಈಗ ಎರಡು ಹತ್ತಿ ಉಂಡೆಗಳನ್ನು ತೆಗೆದುಕೊಂಡು ಪಾರ್ಶ್ವವಾಗಿ ಅವುಗಳನ್ನು ನೀರಿನಲ್ಲಿ ಅದ್ದಿಕೊಳ್ಳಿ. ಒಂದು ಉಂಡೆಯ ಮೇಲೆ ಅಲ್ಪ ಪ್ರಮಾಣದಲ್ಲಿ ದಾಲ್ಚಿನ್ನಿ ಪುಡಿಯನ್ನು ಹರಡಿ. ನಂತರ ಅದರ ಮೇಲೆ ಆರೆಂಜ್ ಬೀಜವನ್ನಿಟ್ಟು ಇನ್ನೊಂದು ಹತ್ತಿ ಉಂಡೆಯಿಂದ ಅದನ್ನು ಮುಚ್ಚಿ. ಹೀಗೆ ಹತ್ತಿ ಉಂಡೆಗಳಿಂದ ಮುಚ್ಚಿರುವ ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಅದನ್ನು ಕತ್ತಲು ಹಾಗೂ ಬೆಚ್ಚಗಿರುವ ಜಾಗದಲ್ಲಿ ಒಂದು ವಾರ ಇಡಿ.

ಒಂದು ವಾರದ ನಂತರ ಆ ಬೀಜ ಮೊಳಕೆಯೊಡೆದಿರುವುದನ್ನು ಖಚಿತಪಡಿಸಿಕೊಂಡು ಅದನ್ನು ಮಣ್ಣಿನಲ್ಲಿ ನೆಡಿ. ಮೃದುವಾದ ಗಾಜಿನ ತುಂಡನ್ನು ಅದರ ಸುತ್ತಲು ಇರಿಸಿ, ಇದು ಅಲ್ಲಿ ತೇವಾಂಶವಿರುವುದನ್ನು ಖಚಿತಪಡಿಸುತ್ತದೆ. ಆಗಾಗ ನೀರನ್ನು ಹಾಕುತ್ತಿರಿ. ಶೀಘ್ರದಲ್ಲೆ ಆರೆಂಜ್ ಗಿಡ ಬೆಳೆಯಲು ಪ್ರಾರಂಭಿಸುತ್ತದೆ.

ಸ್ಟ್ರಾಬೆರಿ


Strawberry fruit (Pexels)

ಇದೊಂದು ಎಕ್ಸಾಟಿಕ್ ಹಣ್ಣಾಗಿದ್ದು ಮಕ್ಕಳಿಗಂತೂ ಇದು ತುಂಬಾನೆ ಇಷ್ಟ. ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಈ ಹಣ್ಣು ಸ್ವಲ್ಪ ಅಹ್ಲಾದಕರ ಹುಳಿ ಹಾಗೂ ಸಿಹಿ ಮಿಶ್ರಣವನ್ನು ಹೊಂದಿರುತ್ತದೆ. ಈ ಹಣ್ಣುಗಳ ಬೀಜಗಳು ಅದರ ಹೊರ ಹೊರ ಚರ್ಮದಲ್ಲೇ ಇರುವುದರಿಂದ ಹಣ್ಣಿನ ಮೆಲ್ಭಾಗವನ್ನು ಎಚ್ಚರಿಕೆಯಿಂದ ಸ್ಲೈಸ್ ಗಳನ್ನಾಗಿ ಕತ್ತರಿಸಿ ಒಣಗಲು ಇಡಿ.

ಒಂದೊಮ್ಮೆ ಹಣ್ಣಿನ ಸ್ಲೈಸ್ ಮಾಡಿರುವ ಹೊರ ಸಿಪ್ಪೆಯು ಒಣಗಿದ ಮೇಲೆ ಅದರಿಂದ ಬೀಜಗಳನ್ನು ಸುಲಭವಾಗಿ ತೆಗೆಯಬಹುದು. ಹೀಗೆ ಬೀಜಗಳನ್ನು ತೆಗೆದುಕೊಂಡು ಮಣ್ಣಿನಲ್ಲಿ ನೆಡಿ. ಸ್ಟ್ರಾಬೆರಿ ಸಸ್ಯ ಬೆಳೆಯಲಾರಭಿಸುತ್ತದೆ.

ಲಿಂಬೆ


Lemon (Pexels)

ಭಾರತೀಯ ಅಡುಗೆ ಖಾದ್ಯಗಳಲ್ಲಿ ಸಾಕಷ್ಟು ಬಳಸಲ್ಪಡುವ ಹಣ್ಣು ಇದಾಗಿದೆ. ವೈಟಮಿನ್ ಸಿ ಯಿಂದ ಸಮೃದ್ಧವಾಗಿರುವ ಲಿಂಬೆಯ ಅನೇಕ ಪೋಷಕ ತತ್ವಗಳು ಆರೋಗ್ಯಕ್ಕೆ ಲಾಭದಾಯಕವಾಗಿವೆ. ಅಲ್ಲದೆ ಕೆಲ ಖಾದ್ಯಗಳಿಗೆ ಲಿಂಬೆ ರಸವು ಅದ್ಭುತವಾದ ಸ್ವಾದವನ್ನು ನೀಡುತ್ತದೆ.

ಲಿಂಬೆಯಲ್ಲಿರುವ ಬೀಜವನ್ನು ತೆಗೆದುಕೊಂಡು ಅದನ್ನು ಆರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ತದನಂತರ ಅದರ ಮೇಲ್ಮೈ ಪದರವನ್ನು ಕತ್ತರಿಸಿ ತೆಗೆದು ಅದನ್ನು ಒಂದುವರೆ ಇಂಚಿನಷ್ಟ ಆಳದಲ್ಲಿ ಮಣ್ಣಿನಲ್ಲಿ ನೆಡಿ. ಆಗಾಗ ನೀರುಣಿಸುತ್ತಿರಿ. ಕೆಲ ಸಮಯದಲ್ಲೇ ಲಿಂಬೆ ಗಿಡ ಒಡಮೂಡುತ್ತದೆ.

ಟೊಮ್ಯಾಟೊ


Tomato (Pexels)

ಪ್ರತಿನಿತ್ಯ ಅಡುಗೆ ಮನೆಯಲ್ಲಿ ಬಳಸಲಾಗುವ ಹಣ್ಣು ಇದಾಗಿದೆ. ಸಾರಿರಲಿ, ಸಲಾಡ್ ಇರಲಿ ಟೊಮ್ಯಾಟೊಗಳಿಲ್ಲದೆ ಅದು ಪೂರ್ಣಗೊಳ್ಳುವುದೇ ಇಲ್ಲ. ಅಲ್ಲದೆ ಪೊಟ್ಯಾಸಿಯಂ ಹಾಗೂ ವೈಟಮಿನ್ ಗಳಿಂದ ಸಮೃದ್ಧವಾಗಿರುವ ಈ ಹಣ್ಣು ಆರೋಗ್ಯಕ್ಕೆ ಲಾಭಕಾರಿಯೂ ಹೌದು.

ಟೊಮ್ಯಾಟೊ ಹಣ್ಣನ್ನು ಸಣ್ಣ ಸಣ್ಣ ಸ್ಲೈಸ್ ಗಳನ್ನಾಗಿ ಕತ್ತರಿಸಿ. ನಂತರ ಆ ಸ್ಲೈಸ್ ಗಳನ್ನು ಮಣ್ಣಿನಲ್ಲಿ ಹರಡಿ ಅದರ ಮೇಲೆ ಮಣ್ಣಿನ ಇನ್ನೊಂದು ತೆಳುವಾದ ಪದರನ್ನು ಹರಡಿ. ಕೆಲ ದಿನಗಳಲ್ಲೆ ಚಿಕ್ಕ ಚಿಕ್ಕ ಟೊಮ್ಯಾಟೊ ಸಸಿಗಳು ಬೆಳೆಯುವುದನ್ನು ಕಾಣಬಹುದು.

Exit mobile version